ಸ್ಯಾಂಡಲ್ವುಡ್ ನಿರ್ದೇಶಕ ಪವನ್ ಒಡೆಯರ್ ಲವ್ ಸ್ಟೋರಿ ಸಿನಿಮಾಗೆ ಲವ್ ಗುರು ಇದ್ದಂತೆ. ಇವರು ನಿರ್ದೇಶಿಸಿರುವ ಚಿತ್ರಗಳಲ್ಲಿ ಪ್ರೇಮಿಗಳಿಗೆ ಹಿತವೆನಿಸೋ ಲವ್ ಸ್ಟೋರಿ ಇದ್ದೇ ಇರುತ್ತದೆ. ‘ಗೂಗ್ಲಿ’ ಈ ಜನರೇಷನ್ನ ಲವ್ಸ್ಟೋರಿಗೆ ಓಂಕಾರ ಹಾಕಿತ್ತು. ಬಾಕ್ಸ್ ಆಫೀಸ್ ಕಿಂಗ್ ಆಗೋದರ ಜೊತೆಗೆ ಜನರ ಮನಸ್ಸಿನಲ್ಲೂ ಗೂಗ್ಲಿ ತಿರುಗಿಸಿತ್ತು. ಬಳಿಕ ಪವನ್ ಒಡೆಯರ್ ಹಾರರ್, ಆ್ಯಕ್ಷನ್, ಕಾಮಿಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಹಳೆಯ ಗತ್ತಿನೊಂದಿಗೆ ‘ರೇಮೊ’ ಮೂಲಕ ಲವ್ ಕಹಾನಿಯೊಂದಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ.