Pakಗೆ ಸೀರೆ ತೆಗೆದುಕೊಂಡು ಹೋದ ಪ್ರಧಾನಿ ಯಾರು?-Modi Pak ಭೇಟಿ ಬಗ್ಗೆ HDK ಪ್ರಶ್ನೆ
"ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯಾವಾಗಲೂ ಪಾಕಿಸ್ತಾನದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಇವರಿಗೆ ರಾಜ್ಯದ ಬಗ್ಗೆ ಮಾತನಾಡುವುದು ಗೊತ್ತೇ ಇಲ್ಲ. ಎಲ್ಲರಿಗಿಂತ ಮೊದಲು ಹಿಂದೆಯೇ ಯಾರದ್ದೋ ಮದುವೆ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಸೀರೆ ತೆಗದುಕೊಂಡು ಹೋದ ಪ್ರಧಾನಿ ಯಾರು?" ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ. ಈ ಮೂಲಕ 2015ರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಶರೀಫರ ಮೊಮ್ಮಗಳ ಮದುವೆಗೆಂದು ಲಾಹೋರ್ಗೆ ದಿಢೀರ್ ಭೇಟಿ ನೀಡಿದ್ದ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ.