'ಅಪಘಾತದ ದಿನ ಕಾರು ಚಲಾಯಿಸುತ್ತಿದ್ದಿದ್ದು ನಾನಲ್ಲ, ನನ್ನ ಚಾಲಕ Balu'- Mohammed Nalapad
ಠಾಣೆಗೆ ಹೋಗುವ ಮುನ್ನ ನಲಪಾಡ್ ಅವರು ಮಾಧ್ಯಮದವರ ಮುಂದೆ ಗದ್ಗದಿತಗೊಂಡು ಮಾತನಾಡಿದ್ಧಾರೆ. ವಿದ್ವತ್ ಹಲ್ಲೆ ಘಟನೆ ನಂತರ ತಾನು ಸಾಕಷ್ಟು ಬದಲಾಗಿದ್ದೇನೆ. ಆದರೆ ಈಗಲೂ ಕೂಡ ಗೂಂಡಾ ಎಂದು ನನ್ನನ್ನ ಕರೆಯುತ್ತೀರಿ. ನನಗೇನೂ ಮನಸ್ಸಿಲ್ವಾ? ನಾನೇನೂ ಮನುಷ್ಯನಲ್ಲವಾ? ಎಂದು ನಲಪಾಡ್ ಪ್ರಶ್ನೆ ಮಾಡಿದ್ಧಾರೆ. ಅಪಘಾತ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಸದಾಶಿವನಗರ ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ನಲಪಾಡ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು