Diganth And Aindrita Ray To Get Married On December
Diganth And Aindrita Ray To Get Married On December 12
ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ದಿಗಂತ್ ಹಾಗು ಐಂದ್ರಿತಾ ಹಸೆ ಮಣೆ ಏರೋಕೆ ರೆಡಿಯಾಗಿದ್ದಾರೆ. ಡಿಸೆಂಬರ್ 12 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಭಾಷ್ ಭವನದಲ್ಲಿ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಜೋಡಿ ಸಿದ್ಧವಾಗಿದೆ. ಮದುವೆಗೆ ಬಂಧು ಹಾಗು ಮಿತ್ರರನ್ನು ಆಹ್ವಾನಿಸಲು ಎರಡು ರೀತಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ.
ಮದುವೆಗೆ ಆಗಮಿಸುವ ಅತಿಥಿಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕೆಂದು ಕ್ಯೂಟ್ ಜೋಡಿ ಮನವಿ ಮಾಡಿಕೊಂಡಿದೆ. ಮದುವೆ ಮುನ್ನ ಅಂದ್ರೆ ಇದೇ ತಿಂಗಳು 16ರಂದು ತಮ್ಮ ಆತ್ಮೀಯ ಗೆಳೆಯರಿಗಾಗಿ ವಿಶೇಷ ಪಾರ್ಟಿಯನ್ನು ದಿಗಂತ್-ಐಂದ್ರಿತಾ ಆಯೋಜನೆ ಮಾಡಿದ್ದಾರೆ.
ದಿಗಂತ್ ಬಾವಿ ಪತ್ನಿ ಐಂದ್ರಿತಾರಿಗೆ ಗೋವಾದ ಶೂಟಿಂಗ್ ಸ್ಪಾಟ್ ನಲ್ಲಿಯೇ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ದಿಗಂತ್ ಶ್ರೀಲಂಕಾದಲ್ಲಿ ಬ್ಯಾಚೂಲರ್ ಪಾರ್ಟಿ ಮುಗಿಸಿದ್ದು, ಐಂದ್ರಿತಾ ‘ಗರುಡ’ ಚಿತ್ರದ ಚಿತ್ರೀಕರಣದಿಂದ ರಜೆ ತೆಗೆದುಕೊಂಡು ಬಂಧುಗಳಿಗೆ ಮದುವೆ ಕಾರ್ಡ್ ವಿತರಣೆಯಲ್ಲಿ ಬ್ಯುಸಿಯಾಗಿದ್ದರಂತೆ. ಕರ್ನಾಟಕ ಮತ್ತು ಬಂಗಾಳಿ ಸಂಪ್ರದಾಯದಂತೆ ಮದುವೆ ನಡೆಯಲಿದೆ.