Pejawar Shree Passes Away : ಮಹಾಸಂತ ಪೇಜಾವರ ಶ್ರೀ ವಿಶ್ವೇಶತೀರ್ಥರು ನಿನ್ನೆ ಧೈವಾಧೀನರಾಗಿದ್ದು, ಬೆಂಗಳೂರಿನ ವಿದ್ಯಾಪೀಠದಲ್ಲಿ ಮಾಧ್ವ ಸಂಪ್ರದಾಯದ ವಿಧಿವಿಧಾನಗಳ ಮೂಲಕ ಅವರ ಅಂತ್ಯಕ್ರಿಯೆ ನೆರವೇರಿದೆ. ವಿದ್ಯಾಪೀಠದ ಕಾರ್ಯದರ್ಶಿ ಕೇಶವಚಾರ್ಯ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಶ್ರೀಗಳನ್ನ ಪದ್ಮಾಸನದಲ್ಲಿ, ಮಣ್ಣಿನ ಗುಂಡಿಯೊಳಗೆ ಕೂರಿಸಿ ಅಂತಿಮ ವಿದಾಯ ಹೇಳಲಾಯಿತು. ಇನ್ನೂ ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದು, ಇಂದಿನಿಂದ ಭಕ್ತರು ಶ್ರೀಗಳ ಬೃಂದಾವನ ದರ್ಶನ ಮಾಡಬಹುದು ಎಂದು ಪೂರ್ಣ ಪ್ರಜ್ಞಾ ವಿದ್ಯಾಪೀಠದ ಕಾರ್ಯದರ್ಶಿ ಕೇಶವಚಾರ್ಯ ತಿಳಿಸಿದ್ದಾರೆ. ಭಾನುವಾರ ಉಡುಪಿ ಭಾಗದ ಮಧ್ವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನೆರವೇರಿದೆ. ರಾತ್ರಿಪೂರ್ತಿ ಅವರ ಬೃಂದಾವನ ಪ್ರವೇಶ ಆಗಿದ್ದು, ರಾತ್ರಿ ಪೂರ್ತಿ ಭಜನೆ-ಆರಾಧನೆ ನಡೆದಿದೆ. ಹೀಗಾಗಿ ಇಂದಿನಿಂದ ಶ್ರೀಗಳ ಬೃಂದಾವನ ದರ್ಶನ ಮಾಡಬಹುದು ಎನ್ನಲಾಗಿದೆ.